ಗೆಲುವು ನಮ್ಮದೇ

ಬೇಕಿಲ್ಲ ಗೆಳತಿ ನಮಗೆ
ಯಾರ ಭಿಕ್ಷೆ
ಆತ್ಮವಿಶ್ವಾಸವೇ ನಮಗೆ
ಶ್ರೀರಕ್ಷೆ

ಇಲ್ಲಿ ನೀಲಿ ಬಾನಿಲ್ಲ
ಮಿನುಗುವ ತಾರೆಗಳಿಲ್ಲ
………………
………………
ಅದಿಲ್ಲ ಇದಿಲ್ಲ
ಇಲ್ಲ. ಎನೇನೂ ಇಲ್ಲ!
ಇಲ್ಲಗಳ ಬದಿಗೊತ್ತಿ
ಎಲ್ಲವಾಗುವ ಛಲ
ನಮ್ಮಲೇಕಿಲ್ಲ?

ಛಲವೊಂದಿದ್ದರೆ ಸಾಕು
ಬರೀ ಹಿಮಾಲಯಕೇ ಏನು?
ಬಾಂದಳಕೇ ದಾರಿ ಕಟ್ಟಬಲ್ಲೆವು
ನಾವು

ಅವರಿವರ ಅಡಿಗಳ ಕೆಳಗಿನ
ನಮ್ಮ ನುಡಿಯುಳಿಸುವುದಷ್ಟೇ ಅಲ್ಲ
ಅವರ ನೆತ್ತಿಯ ಮೇಲೆ
ನಮ್ಮ ಪಡಿಮೂಡಿಸಬೇಕು ಗೆಳತಿ!

ಇಲ್ಲಿ ದಾರಿಗಳಿಲ್ಲ
ಹಳ್ಳ-ಕಂದರ, ಶಿಖರ-ಪ್ರಪಾತಗಳೇ ಎಲ್ಲಾ!
ಅಂತರದಾಟಲು,
ಮೀರಿ ನಿಲ್ಲಲು
ತಕ್ಕ ಅವಕಾಶಕೆ ಕಾಯಲೇಬೇಕು!

ಕಾಯಲಿಲ್ಲವೇ ನನ್ನ-ನಿನ್ನಂತೆಯೇ
ಮೈಥಿಲಿ-ಪಾಂಚಾಲಿ, ಅಹಲ್ಯೆ-ಶಕುಂತಲೇ?
ತಮ್ಮ ತಮ್ಮ ಗೆಲುವಿಗಾಗಿ?
ತಾಳ್ಮೆಯೇ ಇಲ್ಲಿ ತಪ! ಗೆಳತಿ

ಇಂದಲ್ಲ ನಾಳೆ
ಗೆದ್ದೆ ಗೆಲ್ಲುವೆವೆಂಬ ವಿಶ್ವಾಸ,
ಆ ಘಳಿಗೆಗಾಗಿ
ತಾಳ್ಮೆಯಿಂದ ಕಾಯ್ವ ಶ್ವಾಸ
ನಮ್ಮದಾದರೆ….
ಗೆಲುವು ನಮ್ಮದೇ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗದ್ಯ-ಪದ್ಯ
Next post ಅಸೂಯೆ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys